ಪಾಟ್ನಾ: ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ವೈದ್ಯೆಯೊಬ್ಬರು ತಮ್ಮ ಪ್ರಿಯಕರನ ಮರ್ಮಾಂಗವನ್ನೇ ತುಂಡರಿಸಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ಕಳೆದ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಲಗಳ ಪ್ರಕಾರ, ಇಬ್ಬರೂ ವಿವಾಹ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿ ವಿವಾಹ ಮಾಡಿಕೊಳ್ಳಲಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಪ್ರಿಯಕರ ಮದುವೆಗೆ ನಿರಾಕರಿಸಿದ್ದಾನೆ. ಆಗ ಉಪಾಯದಿಂದ ಮನೆಗೆ ಕರೆದೊಯ್ದ ವೈದ್ಯೆ, ಮಾರ್ಮಾಂಗವನ್ನೇ ತುಂಡರಿಸಿದ್ದಾಳೆ. ಕೃತ್ಯದ ಬೆನ್ನಲ್ಲೇ ಪ್ರಿಯಕರ ಚೀರಿದ್ದು, ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಬಿಹಾರದಲ್ಲೇ ಇಂತಹ ಪ್ರಕರಣಗಳು ಇದೇ ವರ್ಷದ ಮಾರ್ಚ್ ನಲ್ಲಿ ಹಾಗೂ ಇತ್ತೀಚೆಗೂ ನಡೆದಿದ್ದವು. ಈ ಪ್ರಕರಣದೊಂದಿಗೆ ಇಂಥ ಪ್ರಕರಣಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಇನ್ನು ಕಾಲಿನ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ಮುಂಬೈ ಆಸ್ಪತ್ರೆಯೊಂದರ ವೈದ್ಯರು, ನಿನ್ನೆ ಬಾಲಕನೊಬ್ಬನ ಮರ್ಮಾಂಗವನ್ನು ಕತ್ತರಿಸಿದ್ದ ಬಗ್ಗೆ ನಿನ್ನೆಯಷ್ಟೇ ವರದಿಯಾಗಿತ್ತು.