ಬೆಂಗಳೂರು: ಸಲಿಂಗಿಯೋರ್ವ ಪರಿಚಯಸ್ಥ ವ್ಯಕ್ತಿ ಮೇಲೆಯೇ ಅತ್ಯಾಚಾರ ಎಸಗಿ ಆತನ ಬಳಿ ಇದ್ದ ಹಣ, ಒಡವೆ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಹಳ್ಳಿಯೊಂದರಲ್ಲಿ ನಡೆದಿದೆ.
ಶ್ಯಾಮ್ ಪಾಟೀಲ್ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದಾನೆ. ಸಂತ್ರಸ್ತನು ನಾನು ಹೆಚ್ಐವಿ ಪೀಡಿತನೆಂದು ಹೇಳಿಕೊಂಡು ಆರೋಪಿಗೆ ಪರಿಚಯ ಮಾಡಿಕೊಂಡಿದ್ದ. ಆರೋಪಿ ಕೂಡ ನಾನು ಕುಷ್ಠರೋಗಿ ಎಂದು ಹೇಳಿಕೊಂಡಿದ್ದ ಎನ್ನಲಾಗಿದೆ.
ಇತ್ತೀಚೆಗೆ ಇಬ್ಬರೂ ಬಹಳ ಆತ್ಮೀಯರಾಗಿದ್ದರು. ನಿನ್ನೆ ಸಂತ್ರಸ್ತನ ಪತ್ನಿ & ಮಕ್ಕಳು ಊರಿಗೆ ತೆರಳಿದ್ದ ವೇಳೆ ಮನೆಗೆ ಆಗಮಿಸಿದ ಆರೋಪಿ, ಜ್ಯೂಸ್ ಗೆ ನಿದ್ರೆ ಮಾತ್ರೆ ಹಾಕಿದ್ದ. ಕುಡಿದ ಕೂಡಲೇ ಮುಖಕ್ಕೆ ಮತ್ತು ಬರಿಸುವ ಸ್ಪ್ರೇ ಹಾಕಿ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಕಬೋರ್ಡ್ ನಲ್ಲಿದ್ದ ೮೦ ಗ್ರಾಮ್ ಚಿನ್ನ, ಒಂದು ಮೊಬೈಲ್ ಹಾಗೂ ೨೦ ಸಾವಿರ ರೂ. ನಗದು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ.
ಈ ಸಂಬಂಧ ಸಂತ್ರಸ್ತನು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.