ರಾಹುಲ್ ಸಂಸತ್ ಭಾಷಣಕ್ಕೆ ಕತ್ತರಿ

ದೆಹಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನಿನ್ನೆ ಸಂಸತ್ತಿನಲ್ಲಿ ಮಾಡಿದ್ದ ಭಾಷಣದ ಪೈಕಿ ಹಲವು ವಿಚಾರಗಳಿಗೆ ಕತ್ತರಿ ಹಾಕಲಾಗಿದೆ.

ಮೂಲಗಳ ಪ್ರಕಾರ, ರಾಹುಲ್ ಅವರು ನಿನ್ನೆ ಬರೋಬ್ಬರಿ 1 ಗಂಟೆ 40 ನಿಮಿಷ ಮಾತನಾಡಿದ್ದರು. ಈ ವೇಳೆ, ನೀಟ್ ಪರೀಕ್ಷೆ ಸೇರಿದಂತೆ ಹಲವು ವಿಚಾರಗಳ ಮೇಲೆ ಮಾತನಾಡುತ್ತಾ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಭಾರತೀಯ ಜನತಾ ಪಕ್ಷವು ಧರ್ಮಾಧಾರಿತವಾಗಿ ರಾಜಕಾರಣ ಮಾಡುತ್ತಾ, ದೇಶದ ಜನರನ್ನು ವಿಭಜಿಸುತ್ತಿದೆ ಎಂದು ಕಿಡಿಕಾರಿದ್ದರು.

ಈ ವಿಚಾರ ಸೇರಿದಂತೆ ಹಲವು ವಿಷಯಗಳಿಗೆ ಕತ್ತರಿ ಹಾಕುವಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಕಡತದಿಂದ ರಾಹುಲ್ ಅವರ ಬಹುಪಾಲು ಭಾಷಣವನ್ನು ತೆಗೆದುಹಾಕಲಾಗಿದೆ ಎಂಬ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *