ವಾಷಿಂಗ್ಟನ್: ಅಮೆರಿಕಾದ ಖ್ಯಾತ ಕಾರು ತಯಾರಿಕಾ ಕಂಪನಿ ಟೆಸ್ಲಾದ ಮುಖ್ಯಸ್ಥ, ಉದ್ಯಮಿ ಎಲಾನ್ ಮಸ್ಕ್ 12ನೇ ಮಗುವಿಗೆ ತಂದೆಯಾಗಿದ್ದಾರೆ. ಮೂಲಗಳ ಪ್ರಕಾರ, ಮಸ್ಕ್ 2024ರ ಆರಂಭದಲ್ಲಿಯೇ ತಂದೆಯಾದರು ಎಂಬ ಮಾಹಿತಿ ಲಭಿಸಿದೆ.
ಈ ಕುರಿತು ಖುದ್ದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮಸ್ಕ್, ಈ ವಿಚಾರವೇನೂ ಗೌಪ್ಯವಾಗಿರಲಿಲ್ಲ. ನನ್ನ ಸ್ನೇಹಿತರು ಮತ್ತು ಕುಟುಂಬಸ್ಥರಿಗೆಲ್ಲಾ ತಿಳಿದಿತ್ತು. ಆದರೆ ಮಾಧ್ಯಮ ಪ್ರಕಟಣೆ ನೀಡಲಾಗಿರಲಿಲ್ಲ ಅಷ್ಟೇ ಎಂದಿದ್ದಾರೆ.
ಈಗಾಗಲೇ ಇಬ್ಬರು ಮಹಿಳೆಯರನ್ನು ವರಿಸಿರುವ ಮಸ್ಕ್, ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. ಸದ್ಯ ಶಿವೊನ್ ಜಿಲಿಸ್ ಅವರೊಂದಿಗೆ ಮಸ್ಕ್ ವಿವಾಹೇತರ ಸಂಬಂಧ ಹೊಂದಿದ್ದಾರೆ. ಈ ಜೋಡಿಗೆ 2021ರ ನವೆಂಬರ್ ತಿಂಗಳಲ್ಲಿಯೇ ಅವಳಿ ಮಕ್ಕಳು ಜನಿಸಿದ್ದುದು ಗೊತ್ತೇ ಇದೆ. ಅಂದಹಾಗೆ ಎಲಾನ್ ಮಸ್ಕ್ ಅವರ ಸದ್ಯದ ವಯಸ್ಸು 52 ವರ್ಷ.