ಬೆಂಗಳೂರು : ರೇಣುಕಾಸ್ವಾಮಿಯ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಸೇರಿ 17 ಆರೋಪಿಗಳು ಜೈಲು ಸೇರಿದ್ದಾರೆ. ಆದರೆ ಪ್ರಕರಣದ A2 ಆರೋಪಿ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಹೌದು, ಪಟ್ಟಣಗೆರೆ ಶೆಡ್ನಲ್ಲಿ ಜೂ.8ರಂದು ರೇಣುಕಾಸ್ವಾಮಿ ಮರ್ಡರ್ ಆಗಿತ್ತು. ಪ್ರಕರಣವನ್ನು ಮುಚ್ಚಿಹಾಕಲು, ಶವವನ್ನು ಸಾಗಿಸಲು, ಸಾಕ್ಷ್ಯಾ ನಾಶಪಡಿಸಲು, ತಮ್ಮ ಹೆಸರು ಬಾರದಂತೆ ನೋಡಿಕೊಂಡು ಪೊಲೀಸರಿಗೆ ಶರಣಾಗುವಂತೆ ದರ್ಶನ್ ಸಹಚರರಿಗೆ ಸೂಚಿಸಿದ್ದರು.
ಈ ಎಲ್ಲಾ ಕೆಲಸಕ್ಕಾಗಿ ದರ್ಶನ್ 30 ಲಕ್ಷ ರೂಪಾಯಿಯನ್ನೂ ನೀಡಿದ್ದರು ಎನ್ನಲಾಗಿದೆ. ಪೊಲೀಸರ ವಿಚಾರಣೆ ಚುರುಕು ಪಡೆದುಕೊಳ್ಳುತ್ತಿದ್ದಂತೆ ದರ್ಶನ್ ಮನೆ, ಪತ್ನಿ ವಿಜಯಲಕ್ಷ್ಮಿ ಹಾಗೂ ಆರೋಪಿಗಳಿಂದ ಸೇರಿ ಒಟ್ಟು 70 ಲಕ್ಷ ರೂಪಾಯಿ ಸೀಜ್ ಆಗಿದೆ.
ಕಾನೂನು ಪ್ರಕಾರ ಒಬ್ಬರು 10 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಇಟ್ಟುಕೊಂಡರೆ, ಅದಕ್ಕೆ ಸೂಕ್ತ ಕಾರಣ, ದಾಖಲೆಯನ್ನು ನೀಡಬೇಕು. ಈ ನಿಟ್ಟಿನಲ್ಲಿ ಪೊಲೀಸರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದು, ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದರಿಂದ ದರ್ಶನ್ & ಟೀಂಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.