ಕೆಂಪು ಬಣ್ಣದ ಪುಡಿ ಬ್ಯಾನ್.. ಕಬಾಬ್ ಸಿಗಲ್ವಾ?

ಬೆಂಗಳೂರು: ಗೋಬಿ ಮಂಚೂರಿಯ ರಾಸಾಯನಿಕ ಬಣ್ಣಕ್ಕೆ ನಿಷೇಧ ಹೇರಿದ್ದ ರಾಜ್ಯ ಸರ್ಕಾರ, ಕಬಾಬ್‌ಗಳಲ್ಲಿ ಬಳಸುತ್ತಿದ್ದ ಕೃತಕ ಬಣ್ಣವನ್ನೂ ಬ್ಯಾನ್‌ ಮಾಡಿ ಆದೇಶಿಸಿದೆ. ಇದು ಚಿಕನ್‌, ಫಿಶ್‌, ಮಟನ್‌ನಂತಹ ವೆಜ್ & ನಾನ್‌ವೆಜ್‌ನ ಎಲ್ಲಾ ಕಬಾಬ್‌ಗೂ ಅನ್ವಯವಾಗಲಿದೆ ಎಂಬುದು ಗಮನಾರ್ಹ.

ವೆಜ್, ಚಿಕನ್, ಫಿಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣ ಬೆರೆಸುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕಬಾಬ್‌ ತಯಾರಿಕೆ ವೇಳೆ ಬಳಸುವ ಕೃತಕ ಬಣ್ಣಗಳನ್ನು ಇನ್ಮುಂದೆ ಬಳಸದಂತೆ ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆಯು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

ಇನ್ನು ಆದೇಶದ ಅನುಸಾರ, ನಿಯಮವನ್ನು ಉಲ್ಲಂಘಿಸುವ ವ್ಯಾಪಾರಸ್ಥರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಇದರ ಅಡಿಯಲ್ಲಿ 7 ವರ್ಷಗಳಿಂದ ಜೀವಾವಧಿ ಶಿಕ್ಷೆವರೆಗೆ ಜೈಲುಶಿಕ್ಷೆ & 10 ಲಕ್ಷ ರೂ.ವರೆಗೆ ದಂಡವನ್ನೂ ವಿಧಿಸಬಹುದಾಗಿದೆ.

ಸರ್ಕಾರ ಜನರ ಆರೋಗ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದು, ಇದಕ್ಕೆ ವ್ಯಾಪಾರಸ್ಥರು & ಸಾರ್ವಜನಿಕರಿಬ್ಬರೂ ಹೂಂಗುಟ್ಟಿದ್ದು, ಕಲರ್ ಬಳಸದ ಕಬಾಬ್ ತಯಾರಿಸಲು & ಖರೀದಿಸಲು ಒಪ್ಪುತ್ತಿದ್ದಾರೆ.

Leave a Reply

Your email address will not be published. Required fields are marked *