ದೆಹಲಿ: ಸ್ಪೀಕರ್ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೆನಾದರೂ ಅದು ನನ್ನ ನಿರ್ಧಾರವಲ್ಲ, ಪಕ್ಷದ ನಿರ್ಧಾರವೆಂದು ಕಾಂಗ್ರೆಸ್ ಸಂಸದ ಕೆ.ಸುರೇಶ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿ, ಸಂಪ್ರದಾಯ ನೋಡುವುದಾದರೆ ಸ್ಪೀಕರ್ ಆಡಳಿತ ಪಕ್ಷಕ್ಕೆ ಸೇರಿದವರಿಗೆ ಒಲಿದರೆ, ಡೆಪ್ಯುಟಿ ಸ್ಪೀಕರ್ ಪಟ್ಟವು ವಿಪಕ್ಷಗಳಿಗೆ ಒಲಿಯುತ್ತಿತ್ತು. ಆದರೆ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ಬಿಟ್ಟುಕೊಡಲು ಅವರು ಸಿದ್ಧರಿಲ್ಲ. ಬೆಳಗ್ಗೆ 11.50ರವರೆಗೂ ನಾವು ಸರ್ಕಾರದ ಅಂತಿಮ ತೀರ್ಮಾನಕ್ಕಾಗಿ ಕಾಯುತ್ತಿದ್ದೆವು. ಆದರೆ ಅವರಿಂದ ನಮಗೆ ನಿರೀಕ್ಷಿತ ಉತ್ತರ ಸಿಗಲಿಲ್ಲ. ಹಾಗಾಗಿ ನಾವು ಉಮೇದುವಾರಿಕೆ ಸಲ್ಲಿಸಿದೆವೆಂದು ಸ್ಪಷ್ಟಪಡಿಸಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಸ್ಪೀಕರ್ ಓಂ ಬಿರ್ಲಾ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ.