ಜನರೇ.. ವಿದ್ಯುತ್ ಕುರಿತ General rules ಗೊತ್ತಿರಲಿ..

ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ “ಕರ್ನಾಟಕ ಎಲೆಕ್ಟ್ರಿಸಿಟಿ ರೇಗುಲೇಷನ್ ಕಮಿಷನ್” ಸಾರ್ವಜನಿಕರಿಗೆ ಅನುಕೂಲವಾಗಲೆಂದು ಕೆಲ ನಿಯಮಗಳನ್ನು ರೂಪಿಸಿ ಜಾರಿಗೊಳಿಸಿದೆ. ಈ ಕೆಳಗಿನ ನಿಯಮಗಳು ಗ್ರಾಮೀಣ ಪ್ರದೇಶಕ್ಕೆ ಮಾತ್ರವೇ ಅನ್ವಯವಾಗಲಿವೆ. 

>ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(ಫ್ಯುಸ್ ಆಫ್, ಲೈನ್ ಕಟ್ ಆಗಿದ್ದರೆ)- 24 ಗಂಟೆಯೊಳಗೆ ಸಮಸ್ಯೆ ಬಗೆಹರಿಸಬೇಕು.

>ವೋಲ್ಟೇಜ್ ಗೆ ಸಂಬಂಧಿಸಿದಂತೆ ದೂರುಗಳಿದ್ದರೆ-120 ದಿನಗಳ ಒಳಗೆ,

>ಮೀಟರ್ ಸರಿಪಡಿಸುವುದಾಗಿದ್ದರೆ 7 ದಿನ, ಇತರೆ ಕಾರಣಗಳಿದ್ದರೆ-72 ಗಂಟೆಗಳ ಒಳಗೆ,

>ಬಿಲ್ಲಿಂಗ್ ದೂರುಗಳಿದ್ದರೆ-7 ದಿನಗಳೊಳಗೆ

>Disconnection ಬಳಿಕ ವಿದ್ಯುತ್ ಮರು ಪೂರೈಕೆ ಮಾಡಬೇಕಿದ್ದರೆ-24 ಗಂಟೆಯೊಳಗೆ,

>ಕಂಬ ಬಗ್ಗಿದ್ದರೆ 3 ದಿನದ ಒಳಗೆ,

>ಕಂಬ ಡ್ಯಾಮೇಜ್ ಆಗಿದ್ದರೆ 15 ದಿನಗಳೊಳಗೆ,

>ನಿವಾಸಿ ಕಟ್ಟಡಕ್ಕೆ ತಾಕುವಂತೆ Line ಇದ್ದರೆ 15 ದಿನಗಳೊಳಗೆ,

>ವಿದ್ಯುತ್ ಪೂರೈಕೆಗೆ ಮರಗಳು ಅಡ್ಡಿಯಾಗಿದ್ದರೆ 7 ದಿನಗಳ ಒಳಗೆ ತೆರವು ಮಾಡಬೇಕು.

>ಕುಡಿಯುವ ನೀರಿನ ಪೂರೈಕೆ, ಕೈಗಾರಿಕೆ, ರೈತರ ಪಂಪ್ ಸೆಟ್ ಗೆ ಅಳವಡಿಸಿರುವ ಟ್ರಾನ್ಸ್ ಫಾರ್ಮರ್ ಸಮಸ್ಯೆ ಇದ್ದರೆ 24 ಗಂಟೆಯೊಳಗೆ ಬಗೆಹರಿಸಬೇಕು.

>ವಿದ್ಯುತ್ ಕಳ್ಳತನವಾಗುತ್ತಿದ್ದರೆ 1 ತಿಂಗಳ ಒಳಗೆ ತಡೆಹಿಡಿಯಬೇಕು.

>ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ದುರ್ಬಳಕೆ ಆಗುತ್ತಿದ್ದರೆ 15 ದಿನಗಳೊಳಗೆ ತಡೆಹಿಡಿಯಬೇಕು.

>ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿಬಂದರೆ 1 ತಿಂಗಳ ಒಳಗೆ ಬಗೆಹರಿಸಬೇಕು.

>ವಿದ್ಯುತ್ ಪೂರೈಕೆ ಕೋರಿ ಅರ್ಜಿ ಸಲ್ಲಿಸಿದ್ದರೆ 48 ಗಂಟೆಗಳ ಒಳಗೆ ತಾತ್ಕಾಲಿಕ ವಿದ್ಯುತ್ ಪೂರೈಸಬೇಕು.

>ಹೊಸ ಕನೆಕ್ಷನ್ ಅಗತ್ಯವೆಂದು ಕಂಡು ಬರುವ ಜಾಗಗಳಲ್ಲಿ 45 ದಿನಗಳೊಳಗೆ ವಿದ್ಯುತ್ ಪೂರೈಕೆಯನ್ನು ವಿಸ್ತರಿಸಬೇಕು.

>ಸಿಂಗಲ್ ಫೇಸ್ ಇದ್ದರೆ 30 ದಿನಗಳೊಳಗೆ ಥ್ರೀ ಫೇಸ್ ಗೆ ಬದಲಿಸಬೇಕು.

>ಮಾಲೀಕತ್ವಕ್ಕೆ ಸಂಬಂಧಿಸಿದಂತೆ 7 ದಿನಗಳೊಳಗೆ ಹೆಸರನ್ನು ಬದಲಾವಣೆ ಮಾಡಿಕೊಡಬೇಕು.

>ಡೆಪಾಸಿಟ್ ಗಳನ್ನು 60 ದಿನಗಳೊಳಗೆ ರೀಫಂಡ್ ಮಾಡಬೇಕು. ಈ ಕುರಿತ ಪ್ರಮಾಣಪತ್ರವನ್ನು ಒಂದೇ ದಿನದಲ್ಲಿ ವಿತರಿಸಬೇಕು.

>ಹೆಚ್ಚುವರಿ ಟಿಸಿಗಾಗಿ ಅರ್ಜಿ ಸಲ್ಲಿಸಿದ್ದರೆ 1 ತಿಂಗಳ ಒಳಗೆ ವ್ಯವಸ್ಥೆ ಮಾಡಬೇಕು.

>TC ಸಾಮರ್ಥ್ಯ ಹೆಚ್ಚಿಸುವಂತೆ ಕೋರಿದ್ದರೆ 15 ದಿನಗಳೊಳಗೆ ಬಗೆಹರಿಸಬೇಕು.

>ಮೇಲಿನ ಯಾವುದೇ ಸಮಸ್ಯೆಗಳಲ್ಲದೆ ಇತರೆ ಸಮಸ್ಯೆಗಳಿದ್ದರೆ 7 ದಿನಗಳೊಳಗೆ ಬಗೆಹರಿಸಬೇಕು.

Leave a Reply

Your email address will not be published. Required fields are marked *