ಸರ್ಕಾರಿ ನೌಕರರಿಗೆ ಇರುವ ಸಾಮಾನ್ಯ ನಿಯಮಗಳು?

ಕರ್ನಾಟಕ ಸರ್ಕಾರಿ ನೌಕರರಿಗಾಗಿ ವಿಧಿಸಲಾಗಿರುವ ಸಾಮಾನ್ಯ ನಿಯಮಗಳ ಮಾಹಿತಿ ಇಲ್ಲಿದೆ. ಇವು ಮುಖ್ಯವಾಗಿ ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಾವಳಿ(KCSR) ಮತ್ತು ನಡವಳಿಕೆ ನಿಯಮಗಳು-1966ರ ಅಡಿಯಲ್ಲಿ ರೂಪಿಸಲಾಗಿದೆ:

1. ನೇಮಕಾತಿ ಮತ್ತು ನೇಮಕ:

  • ಸರ್ಕಾರಿ ನೌಕರರ ನೇಮಕಾತಿಯು ಕರ್ನಾಟಕ ಸಿವಿಲ್ ಸರ್ವೀಸ್(ಸಾಮಾನ್ಯ ನೇಮಕಾತಿ) ನಿಯಮಗಳಂತೆ ನಡೆಯುತ್ತದೆ.
  • ಮೀಸಲಾತಿ ನೀತಿಗಳು ಎಸ್‌ಸಿ/ಎಸ್‌ಟಿ, ಓಬಿಸಿ, ಮಹಿಳೆಯರು & ಮಾಜಿ ಸೈನಿಕರಿಗೆ ಅನ್ವಯಿಸುತ್ತವೆ.
  • KPSC ನಡೆಸುವ ಪರೀಕ್ಷೆ, ಸಂದರ್ಶನದ ಮೂಲಕ ನೇಮಕಾತಿ ಮಾಡಿ, ಅದರ ಆಧಾರದ ಮೇಲೆಯೇ ಪದೋನ್ನತಿಯನ್ನೂ ನೀಡಲಾಗುತ್ತದೆ.

2. ಪ್ರೊಬೇಷನರಿ ಅವಧಿ:

  • ಹೊಸದಾಗಿ ನೇಮಕಗೊಂಡ ನೌಕರರು 2 ವರ್ಷಗಳ ಪ್ರೊಬೇಷನರಿ ಅವಧಿಯಲ್ಲಿ ಸೇವೆ ಸಲ್ಲಿಸಬೇಕು.
  • ಈ ಅವಧಿಯಲ್ಲಿ ನೌಕರರ ಕಾರ್ಯಕ್ಷಮತೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತದೆ.
  • ನೌಕರನ ಸೇವೆಯು ಅಸಮಾಧಾನಕರವಾಗಿದ್ದರೆ ಪ್ರೊಬೇಷನರಿ ಅವಧಿಯನ್ನು ವಿಸ್ತರಿಸಬಹುದು ಅಥವಾ ಸೇವೆಯಿಂದ ಹೊರದೂಡಲ್ಪಡಬಹುದು.

3. ನಡವಳಿಕೆ ನಿಯಮಗಳು:

ನೌಕರರು ಕೆಳಗಿನ ನಿಯಮಗಳನ್ನು ಪಾಲಿಸಬೇಕು:

  • ಪ್ರಾಮಾಣಿಕತೆ, ನಿಷ್ಠೆಯಿಂದ ನಡೆಸದುಕೊಂಡು ಶಿಸ್ತು ಕಾಪಾಡಬೇಕು.
  • ಸಾರ್ವಜನಿಕ ಸೇವೆಯಲ್ಲಿ ಪಕ್ಷಪಾತ ಮಾಡದೆ ಸೇವೆ ಮಾಡಬೇಕು.
  • ರಾಜಕೀಯ ಚಟುವಟಿಕೆಗಳಿಂದ ದೂರವಿರಬೇಕು.
  • ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಬಾರದು.
  • ಮೇಲಧಿಕಾರಿಗಳ ಕಾನೂನುಬದ್ಧ ಆದೇಶಗಳನ್ನು ಪಾಲಿಸಬೇಕು.

4. ಕೆಲಸದ ವೇಳೆ & ಕರ್ತವ್ಯ:

  • ಕಚೇರಿಯ ನಿಗದಿತ ಸಮಯವನ್ನು ಪಾಲಿಸಬೇಕು.
  • ತಡವಾಗಿ ಹಾಜರಾಗುವುದು ಮತ್ತು ನಿರಂತರವಾಗಿ ತಡವಾಗಿ ಬರುತ್ತಿದ್ದರೆ ಅದನ್ನು ಶಿಸ್ತಿನ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
  • ಕಚೇರಿಯಲ್ಲಿ ಸೇವೆ ಮಾಡುವ ಅವಧಿಯಲ್ಲಿ ಖಾಸಗಿ ಉದ್ಯೋಗ ಅಥವಾ ಕೆಲಸ ಮಾಡುವಂತಿಲ್ಲ.

5. ರಜೆ ನಿಯಮಗಳು:

ನೌಕರರು ಈ ಕೆಳಗಿನ ರಜೆಗಳನ್ನು ಪಡೆಯಲು ಅರ್ಹರಿರುತ್ತಾರೆ:

  • ಸಾಮಾನ್ಯ ರಜೆ (CL)
  • ಸಂಪಾದಿತ ರಜೆ (EL)
  • ವೈದ್ಯಕೀಯ ರಜೆ
  • ಮಾತೃತ್ವ/ಪಿತೃತ್ವ ರಜೆ
  • ಅನುಮತಿಯನ್ನು ಪಡೆದು ಅಧ್ಯಯನ ರಜೆಯನ್ನೂ ಕೂಡ ತೆಗೆದುಕೊಳ್ಳಲು ನಿಮಯಮಾನುಸಾರ ಅವಕಾಶವಿದೆ.

6. ಆಸ್ತಿ ಘೋಷಣೆ:

  • ನೌಕರರು ಪ್ರತಿವರ್ಷ ತಮ್ಮ ಚರಾಸ್ತಿ & ಸ್ಥಿರ ಆಸ್ತಿಗಳ ಬಗ್ಗೆ ಘೋಷಣೆ ಮಾಡಬೇಕು.
  • ಸ್ಥಿರ ಆಸ್ತಿ ಖರೀದಿ/ಮಾರಾಟ ಮಾಡುವ ಮುನ್ನ ಸರ್ಕಾರದಿಂದ ಅನುಮತಿ ಪಡೆಯಬೇಕು.

7. ಶಿಸ್ತು ಕ್ರಮ:

ಅಶಿಸ್ತಿನಿಂದ ನಡೆದುಕೊಂಡರೆ ಈ ಕ್ರಮಗಳು ಜಾರಿಗೆ ಬರುತ್ತವೆ:

  • ವಾರ್ನಿಂಗ್ ನೀಡಬಹುದು.
  • ಅಮಾನತು ಮಾಡಬಹುದು.
  • ಬಡ್ತಿ ಅಥವಾ ವೇತನ ಹೆಚ್ಚಳವನ್ನು ತಡೆಯಬಹುದು.
  • ಸೇವೆಯಿಂದ ವಜಾ ಮಾಡಬಹುದು.

ಇವುಗಳ ಬಗ್ಗೆ ಕರ್ನಾಟಕ ಸಿವಿಲ್ ಸರ್ವೀಸ್ (ವರ್ಗೀಕರಣ, ನಿಯಂತ್ರಣ ಮತ್ತು ಮನವಿ) ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.

8. ನಿವೃತ್ತಿ & ಪಿಂಚಣಿ:

  • ಸಾಮಾನ್ಯ ನಿವೃತ್ತಿ ವಯಸ್ಸು 60 ವರ್ಷಕ್ಕೆ ಮಿತಿಗೊಳಿಸಲಾಗಿದೆ.
  • ಕನಿಷ್ಠ ಅರ್ಹ ಸೇವೆಯ ನಂತರ ಪಿಂಚಣಿ ಸೌಲಭ್ಯಗಳು ಅನ್ವಯಿಸುತ್ತವೆ.
  • 20 ವರ್ಷಗಳ ಸೇವೆಯ ನಂತರ ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಬಹುದು.

9. ವರ್ಗಾವಣೆ:

  • ಸರ್ಕಾರವು ನೌಕರರನ್ನು ಆಡಳಿತಾತ್ಮಕ ಅವಶ್ಯಕತೆ ಆಧಾರದ ಮೇಲೆ ವರ್ಗಾವಣೆ ಮಾಡುವ ಹಕ್ಕನ್ನು ಹೊಂದಿರುತ್ತದೆ.
  • ನೌಕರರು ವರ್ಗಾವಣೆಗೆ ಮನವಿ ಮಾಡಿಕೊಳ್ಳಬಹುದು. ಆದರೆ ಅಂತಿಮ ನಿರ್ಧಾರವನ್ನು ಇಲಾಖೆ ಕೈಗೊಳ್ಳಲಿದೆ.

10. ಪದೋನ್ನತಿ(ಬಡ್ತಿ):

  • ಜೇಷ್ಠತೆ, ಅರ್ಹತೆ ಮತ್ತು ಇಲಾಖಾ ಪರೀಕ್ಷೆಗಳ ಆಧಾರದಲ್ಲಿ ಪದೋನ್ನತಿ ನೀಡಲಾಗುತ್ತದೆ.
  • ನೌಕರನ ಅರ್ಹತೆ ಬಗ್ಗೆ ಇಲಾಖಾ ಆಯ್ಕೆ ಸಮಿತಿಗಳು ಪರಿಶೀಲಿಸುತ್ತವೆ.

Leave a Reply

Your email address will not be published. Required fields are marked *