🧠 ಕಿಶೋರಾವಸ್ಥೆಯಲ್ಲಿ ಉಂಟಾಗುವ ಭಾವನಾತ್ಮಕ ಬದಲಾವಣೆಗಳು..

ಕಿಶೋರಾವಸ್ಥೆ ಎಂದರೆ ಮಕ್ಕಳಿಂದ ವಯಸ್ಕ ಹಂತದೊಳಗಿನ ಕಾಲ. ಸಾಮಾನ್ಯವಾಗಿ 10ರಿಂದ 19 ವರ್ಷದೊಳಗಿನವರಲ್ಲಿ ಸಂಭವಿಸುವ ಬದಲಾವಣೆಗಳನ್ನು ಕಿಶೋರಾವಸ್ಥೆ ಎನ್ನಲಾಗುತ್ತದೆ. ಈ ಹಂತದಲ್ಲಿ ದೈಹಿಕ ಬದಲಾವಣೆಗಳ ಜೊತೆಗೆ ಭಾವನಾತ್ಮಕ ಬದಲಾವಣೆಗಳೂ ಸಂಭವಿಸುತ್ತವೆ. ಇದಕ್ಕೆ ಹಾರ್ಮೋನುಗಳ ಬದಲಾವಣೆ, ಮೆದುಳಿನ ಬೆಳವಣಿಗೆ ಮತ್ತು ಸಾಮಾಜಿಕ ಒತ್ತಡವೂ ಕಾರಣವಾಗುತ್ತವೆ.

ಪ್ರಮುಖ ಭಾವನಾತ್ಮಕ ಬದಲಾವಣೆಗಳು

1. ಮನಸ್ಥಿತಿಯ ಓಲಾಟ(Mood Swings):

  • ಕ್ಷಣಕಾಲ ಉತ್ಸಾಹ, ಕ್ಷಣ ಕೋಪ ಅಥವಾ ಮರುಕ್ಷಣವೇ ವಿಷಾದದ ಮನಸ್ಥಿತಿ ಉಂಟಾಗಬಹುದು. ಇದೆಲ್ಲವೂ ಹಾರ್ಮೋನುಗಳ ಬದಲಾವಣೆಗಳಿಂದ ಉಂಟಾಗುವುದು. ಇದರಿಂದ ಕೆಲವೊಮ್ಮೆ ತೊಂದರೆ ಅಥವಾ ಗೊಂದಲ ಉಂಟಾಗುತ್ತದೆ.

2. ಸೂಕ್ಷ್ಮತೆಯ ಹೆಚ್ಚಳ:

  • ಈ ವಯಸ್ಸಿನವರಲ್ಲಿ ಭಾವನೆಗಳಿಗೆ ಸುಲಭವಾಗಿ ಧಕ್ಕೆ ಉಂಟಾಗುತ್ತದೆ. 
  • ಈ ಸಮಯದಲ್ಲಿ ನಾನು ಹೇಗಿದ್ದೇನೆ ಎಂಬ ಕುರಿತಾದ ಆತ್ಮಜ್ಞಾನದ ಹೆಚ್ಚಾಗಿ ಅಭಿವೃದ್ಧಿಯಾಗುತ್ತದೆ.
  • ಇತರರ ಅಭಿಪ್ರಾಯ, ಟೀಕೆಯಿಂದ ಹೆಚ್ಚು ಚಿಂತೆಗೀಡಾಗುತ್ತಾರೆ.

3. ಫ್ರೀಡಂ ಬೇಕೆನಿಸುವಿಕೆ:

  • ಈ ವಯಸ್ಸಿನಲ್ಲಿ ನಮ್ಮ ಜೀವನದ ಬಗ್ಗೆ ನಾವೇ ನಿರ್ಧಾರ ತೆಗೆದುಕೊಳ್ಳಬೇಕೆಂಬ ಬಯಕೆ ಹುಟ್ಟುತ್ತದೆ.
  • ಪೋಷಕರ ಅಭಿಪ್ರಾಯಗಳನ್ನು ವಿರೋಧಿಸುತ್ತಾರೆ.
  • ಹಿರಿಯರ ಜೊತೆ ಜಗಳ ಮಾಡಿಕೊಳ್ಳುತ್ತಾರೆ.

4. ವ್ಯಕ್ತಿತ್ವ ರಚಿಸಿಕೊಳ್ಳುವುದು:

  • “ನಾನು ಯಾರು?” ಎಂದು ತಮ್ಮೊಳಗೇ ಪ್ರಶ್ನಿಸಿಕೊಳ್ಳುತ್ತಾರೆ.
  • ಸ್ವ-ಹಿತಾಸಕ್ತಿ, ನಂಬಿಕೆ & ಮೌಲ್ಯಗಳನ್ನು ಅನ್ವೇಷಿಸುತ್ತಾರೆ.
  • ವಿಭಿನ್ನ ಶೈಲಿ ಅಥವಾ ವರ್ತನೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

5. ಆಕರ್ಷಣೆ & ಪ್ರಣಯ ಭಾವನೆ:

  • ಪ್ರಣಯದ ಭಾವನೆಗಳ ಆರಂಭವಾಗುತ್ತದೆ.
  • ಮೋಹ ಅಥವಾ ಡೇಟಿಂಗ್ ವಿಷಯಗಳಲ್ಲಿ ಆಸಕ್ತಿ ಬೆಳೆಯುತ್ತದೆ.
  • ಹಿಂಸೆ, ಅಸೂಯೆ, ಹೊಟ್ಟೆಕಿಚ್ಚು, ಇರ್ಷೆಯಂತಹ ಹೊಸ ಭಾವನೆಗಳು ಬೆಳೆದು ನೊಂದುಕೊಳ್ಳುತ್ತಾರೆ.

6. ಸ್ನೇಹಿತರ ಪ್ರಭಾವ:

  • ಸ್ನೇಹಿತರೊಂದಿಗೆ ಸೇರಬೇಕೆಂಬ ಬಯಕೆ ಬಲವಾಗಿ ಬೇರೂರುತ್ತದೆ.
  • ಇತರರ ಮೆಚ್ಚುಗೆಯೇ ಹೆಚ್ಚು ಮುಖ್ಯ ಎನಿಸುತ್ತದೆ.
  • ಸ್ನೇಹಿತರ ಸಹವಾಸದಿಂದಾಗಿ ಕೆಲವೊಮ್ಮೆ ಅಪಾಯಕಾರಿ ನಡವಳಿಕೆಗಳನ್ನು ಅನುಸರಿಸಬಹುದು.

7. ಭಾವನಾತ್ಮಕ ಒತ್ತಡ & ಆತಂಕ:

  • ವಿದ್ಯಾಭ್ಯಾಸ, ದೇಹದ ಸೌಂದರ್ಯ ಹಾಗೂ ಭವಿಷ್ಯದ ನಿರೀಕ್ಷೆಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ.
  • ಸಂಬಂಧಗಳು ಹಾಗೂ ಭವಿಷ್ಯದ ಬಗ್ಗೆ ಭಯಪಟ್ಟುಕೊಳ್ಳುತ್ತಾರೆ.
  • ಈ ಸಂದರ್ಭದಲ್ಲಿ ಅಗತ್ಯವಾದಷ್ಟು ನೆರವು ಅಥವಾ ಬೆಂಬಲ ಸಿಗದಿದ್ದರೆ ನಿರಾಶೆ ಪಟ್ಟುಕೊಳ್ಳುತ್ತಾರೆ ಅಥವಾ ಇದು ಮಾನಸಿಕ ಖಿನ್ನತೆಗೂ ದೂಡಬಹುದು.

ಈ ಬದಲಾವಣೆಗಳು ಏಕೆ ಸಂಭವಿಸುತ್ತವೆ?

  • ಎಸ್ಟ್ರೋಜನ್ ಮತ್ತು ಟೆಸ್ಟೋಸ್ಟೆರೋನ್ ಹಾರ್ಮೋನುಗಳು ಭಾವನೆ ಮತ್ತು ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ.
  • ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವು(Prefrontal Cortex) ಇನ್ನೂ ಅಭಿವೃದ್ಧಿಯಲ್ಲಿ ಇರುವುದರಿಂದ ನಿಯಂತ್ರಣ ಸಾಧಿಸಲು ಕಷ್ಟವಾಗುತ್ತದೆ.
  • ಹೊಸ ಜವಾಬ್ದಾರಿ ಮತ್ತು ಸಾಮಾಜಿಕ ಬದಲಾವಣೆಗಳಿಂದ ಒತ್ತಡ ಅನುಭವಿಸುತ್ತಾರೆ.

ಈ ಭಾವನೆಗಳನ್ನು ಹೇಗೆ ನಿಭಾಯಿಸಬಹುದು?

  • ತಂದೆ, ತಾಯಿ, ಶಿಕ್ಷಕರು ಸೇರಿದಂತೆ ಇತರೆ ನಂಬಿಕಸ್ಥ ವಯಸ್ಕರ ಜೊತೆ ಮಾತನಾಡಿ. 
  • ಒಳ್ಳೆಯ ನಿದ್ರೆ ಮಾಡುವ, ಆರೋಗ್ಯಕರ ಆಹಾರ ಸೇವಿಸುವ ಹಾಗೂ ವ್ಯಾಯಾಮ ಮಾಡುವ ಮುಖೇನ self-care ಮಾಡಿಕೊಳ್ಳಿ.
  • ಬರವಣಿಗೆ, ಚಿತ್ರಕಲೆ ಅಥವಾ ಮಾತನಾಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿ.
  • ಮದ್ಯಪಾನ ಅಥವಾ ಮಾದಕ ದ್ರವ್ಯಗಳಿಂದ ದೂರವಿರಿ.
  • ಉತ್ತಮ ಉಸಿರಾಟಕ್ಕಾಗಿ ಧ್ಯಾನ ಮಾಡುವ ಮುಖೇನ ಒತ್ತಡ ನಿರ್ವಹಣೆ ಬಗ್ಗೆ ಕಲಿಯಿರಿ.

ಪೋಷಕರು & ಶಿಕ್ಷಕರ ಪಾತ್ರ:

  • ಮಕ್ಕಳ ಬಗ್ಗೆ ಸಹನೆ ಮತ್ತು ಸಹಾನುಭೂತಿ ಇರಲಿ.
  • ಮಕ್ಕಳು ಮುಕ್ತವಾಗಿ ಮಾತನಾಡಲು ಉತ್ತೇಜಿಸಿ.
  • ಆರೋಗ್ಯಕರ ಸ್ನೇಹ & ಆಸಕ್ತಿಗಳಿಗೆ ಬೆಂಬಲ ನೀಡಿ.
  • ಗಂಭೀರವಾದ ಭಾವನಾತ್ಮಕ ತೊಂದರೆಗಳಿದ್ದರೆ ಗಮನಿಸಿ ಸಲಹೆ, ಸೂಚನೆಗಳನ್ನು ನೀಡಿ.

Leave a Reply

Your email address will not be published. Required fields are marked *