ಪಿಂಚಿಣಿ ಹಣವನ್ನು EPF ಖಾತೆಯಿಂದ ಹಿಂಪಡೆಯಲು EPS – Employees’ Pension Scheme 1995 ಅಡಿಯಲ್ಲಿ ನಿರ್ದಿಷ್ಟ ನಿಯಮಗಳು ಅನ್ವಯಿಸುತ್ತವೆ. ಇಲ್ಲಿ ಅವುಗಳ ಸಂಪೂರ್ಣ ವಿವರವಿದೆ:
🔹 1. ಅರ್ಹತಾ ಷರತ್ತುಗಳು(Eligibility Conditions):
>ಮಾಸಿಕ ಪಿಂಚಿಣಿ ಪಡೆಯಲು ಕನಿಷ್ಠ ಹತ್ತು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
>50ರಿಂದ 58 ವರ್ಷದ ನಡುವೆ ಪಿಂಚಿಣಿ ಪಡೆದಲ್ಲಿ ತುಂಬಾ ಕಡಿಮೆ ಮೊತ್ತವು ಪಿಂಚಿಣಿಯಾಗಿ ಬರಲಿದೆ. ಹಾಗಾಗಿ 58 ವರ್ಷದ ತರುವಾಯ ಅರ್ಜಿ ಸಲ್ಲಿಸುವುದು ಒಳಿತು.
>ಹತ್ತು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ ಅಂತವರು ಒಮ್ಮೆಲೇ ತಮ್ಮ ಪಿಂಚಿಣಿ ಹಣವನ್ನು ಹಿಂಪಡೆಯಬಹುದು.
🔹 2. ಬಳಸಬೇಕಾದ ಅರ್ಜಿ ಫಾರ್ಮ್:
- ಮಾಸಿಕ ಪಿಂಚಣಿ: ➡️ ಫಾರ್ಮ್ 10D
- 10 ವರ್ಷಕ್ಕಿಂತ ಕಡಿಮೆ ಸೇವೆ: ➡️ ಫಾರ್ಮ್ 10C
🔹 3. ಆನ್ಲೈನ್ ಅರ್ಜಿ ಪ್ರಕ್ರಿಯೆ:
- EPFO ಪೋರ್ಟಲ್ಗೆ ಭೇಟಿ ನೀಡಿ:
https://unifiedportal-mem.epfindia.gov.in/memberinterface/ - UAN ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ,
- Online Services > Claim (Form-31, 19, 10C & 10D)ಗೆ ಹೋಗಿ,
- ಅಗತ್ಯವಿರುವ ಫಾರ್ಮ್(10C ಅಥವಾ 10D) ಆಯ್ಕೆ ಮಾಡಿ, ಅರ್ಜಿ ಸಲ್ಲಿಸಿ.
🔹 4. ತೆರಿಗೆ ನಿಯಮಗಳು(Taxation):
- ಮಾಸಿಕ ಪಿಂಚಣಿಗೆ “ವೇತನದಿಂದ ಬಂದ ಆದಾಯ” ನಿಯಮದಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ.
- ಫಾರ್ಮ್ 10C ಅಡಿಯಲ್ಲಿ 10 ವರ್ಷ ಸೇವೆಗೂ ಮೊದಲೇ ಹಿಂಪಡೆದರೆ ಅದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.