ಪಿಎಫ್ ಹಣದ ಮೇಲೆ ಎಷ್ಟು ತೆರಿಗೆ ಹಾಕ್ತಾರೆ?

EPF ಹಣವನ್ನು ಹಿಂಪಡೆಯುವುದು ಸಾಮಾನ್ಯವಾಗಿ ತೆರಿಗೆ ರಹಿತವಾಗಿದೆ. ಆದರೂ ಕೆಲವೊಂದು ಷರತ್ತುಗಳು ಅನ್ವಯವಾಗುತ್ತವೆ. ಯಾವಾಗ ತೆರಿಗೆ ಅನ್ವಯಿಸುತ್ತದೆ ಮತ್ತು ಯಾವಾಗ ಅನ್ವಯಿಸುವುದಿಲ್ಲ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

🔹 1. ತೆರಿಗೆ ರಹಿತ ಪಿಎಫ್ ಹಣ ಹಿಂಪಡೆಯುವ ಸ್ಥಿತಿಗಳು:

✅ ನಿರಂತರವಾಗಿ 5 ವರ್ಷ ಸೇವೆ ಸಲ್ಲಿಸಿದ್ದರೆ,

✅ ಉದ್ಯೋಗ ಬದಲಾವಣೆ ಸಮಯದಲ್ಲಿ PF ಹಣ ಹಿಂಪಡೆಯದೆ 5 ವರ್ಷಗಳ ಕಾಲ ಕೇವಲ ವರ್ಗಾವಣೆ ಮಾಡಿದ್ದರೆ,

✅ನಿವೃತ್ತಿ ಅಥವಾ ನಿವೃತ್ತಿ ನಂತರ ಹಿಂಪಡೆದರೆ ತೆರಿಗೆ ವಿಧಿಸಲಾಗುವುದಿಲ್ಲ.



🔹 2. ಯಾವಾಗ ಪಿಎಫ್ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ?

❌ 5 ವರ್ಷ ಸೇವೆ ಸಲ್ಲಿಸುವುದಕ್ಕೂ ಮುನ್ನವೇ ಹಣ ಹಿಂಪಡೆದರೆ,

❌ EPFO ದಾಖಲೆಗಳಲ್ಲಿ ಪ್ಯಾನ್ ಅಪ್‌ಡೇಟ್ ಆಗಿಲ್ಲದಿದ್ದರೆ,

❌ ಪ್ಯಾನ್ ಅಪ್‌ಡೇಟ್ ಆಗಿದ್ದು, ₹50000ಕ್ಕಿಂತ ಹೆಚ್ಚು ಹಿಂಪಡೆದರೆ ತೆರಿಗೆ ವಿಧಿಸಲಾಗುತ್ತದೆ.

🔹 3. ಟಿಡಿಎಸ್ ನಿಯಮಗಳು:

>₹50000ಕ್ಕಿಂತ ಕಡಿಮೆ ಹಣ ಹೊಂದಿದ್ದರೆ ಪ್ಯಾನ್ ಅಪ್‌ಡೇಟ್ ಮಾಡಿದ್ದರೂ, ಮಾಡಿಲ್ಲದಿದ್ದರೂ ತೆರಿಗೆ ವಿಧಿಸಲಾಗುವುದಿಲ್ಲ.

>₹50000ಕ್ಕಿಂತ ಹೆಚ್ಚಿನ ಹಣ ಖಾತೆಯಲ್ಲಿದ್ದು, ಪ್ಯಾನ್ ಅಪ್‌ಡೇಟ್ ಮಾಡಿದ್ದರೆ 10%, ಮಾಡಿಲ್ಲದಿದ್ದರೆ 30% ತೆರಿಗೆ ವಿಧಿಸಲಾಗುತ್ತದೆ.

Leave a Reply

Your email address will not be published. Required fields are marked *