EPF(ನೌಕರರ ಭವಿಷ್ಯ ನಿಧಿ) ಎಂಬುದು ಸೇವಾ ನಿವೃತ್ತಿ ನಂತರದ ಭದ್ರತೆಗೆ ನೌಕರರು ಸೇವೆ ಮಾಡುವ ಅವಧಿಯಲ್ಲಿ ನಿಧಿ ಸಂಗ್ರಹ ಮಾಡುವ ಶಾಸನಬದ್ಧ ಯೋಜನೆಯಾಗಿದೆ.
ಇದು ಭಾರತ ಸರ್ಕಾರದ ಕಾರ್ಮಿಕ ಮತ್ತು ಔದ್ಯೋಗಿಕ ಸಚಿವಾಲಯದ ಅಧೀನದಲ್ಲಿರುವ Employees’ Provident Fund Organisation ಎಂಬ ಸಂಸ್ಥೆಯ ಮುಖೇನ ನಿರ್ವಹಿಸಲಾಗುತ್ತದೆ.
ಈ ಯೋಜನೆಯ ಪ್ರಕಾರ, 20ಕ್ಕಿಂತ ಹೆಚ್ಚು ನೌಕರರನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯಲ್ಲಿ EPF ನಿಯಮವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
🔹EPF ಕುರಿತ ಮೂಲಭೂತ ಮಾಹಿತಿಗಳು:
ಉದ್ದೇಶ: ನೌಕರರು ಸೇವೆ ಸಲ್ಲಿಸುವ ಸಮಯದಲ್ಲಿ ನಿಧಿಯನ್ನು ಉಳಿತಾಯ ಮಾಡಿ, ನಿವೃತ್ತಿ ಅಥವಾ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವುದೇ ಆಗಿದೆ.
ಯಾರು ಕೊಡುಗೆ ನೀಡುತ್ತಾರೆ?
ನೌಕರ: ಮಾಸಿಕವಾಗಿ ಓರ್ವ ನೌಕರನ ಮೂಲ ವೇತನದ ಪೈಕಿ ಶೇಕಡಾ 12ರಷ್ಟನ್ನು EPFO ನಿಧಿಗೆ ಸಂಗ್ರಹಿಸಿ ಕೊಡಲಾಗುತ್ತದೆ. ಇದಲ್ಲದೆ ಉದ್ಯೋಗದಾತರೂ ಕೂಡ 12% ಕೊಡುಗೆಯನ್ನು ನೀಡುತ್ತಾರೆ. ಇದರಲ್ಲಿನ ಒಂದು ಭಾಗದಷ್ಟು ಮೊತ್ತವು ಪೆನ್ಷನ್ ಯೋಜನೆಗೆ ಹೋಗುತ್ತದೆ.
ಬಡ್ಡಿದರ: EPF ಹಣಕ್ಕೆ ವಾರ್ಷಿಕ ಬಡ್ಡಿ ದೊರೆಯುತ್ತದೆ. ಈ ಬಡ್ಡಿ ವ್ಯವಸ್ಥೆಯು ಕೆಲವು ಷರತ್ತುಗಳನ್ನು ಒಳಗೊಂಡಿರಲಿದ್ದು, ತೆರಿಗೆರಹಿತವಾಗಿರುತ್ತದೆ.
ಪಿಂಚಣಿ ಅಥವಾ ತುರ್ತು ಸಂದರ್ಭದಲ್ಲಿ ಬಳಕೆ:
ಹಣವನ್ನು ಸೇವಾ ನಿವೃತ್ತಿ ನಂತರ ಸಂಪೂರ್ಣವಾಗಿ ಅಥವಾ ವೈದ್ಯಕೀಯ ಚಿಕಿತ್ಸೆ, ಮನೆ ಖರೀದಿ, ಶಿಕ್ಷಣ ವೆಚ್ಚ ಮುಂತಾದ ತುರ್ತು ಸಂದರ್ಭಗಗಳಿಗಾಗಿ ಒಟ್ಟು ಮೊತ್ತದಲ್ಲಿ ಭಾಗಶಃ ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
UAN(ಯುನಿವರ್ಸಲ್ ಅಕೌಂಟ್ ನಂಬರ್):
ಈ ಯೋಜನೆಯ ಅಡಿಯಲ್ಲಿ ನೋಂದಾಯಿತನಾದ ಪ್ರತಿಯೊಬ್ಬ ಸದಸ್ಯನಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಲಾಗುತ್ತದೆ. ಹನ್ನೆರಡು ಅಂಕಿಯ ಈ ನಂಬರ್, ನೀವು ಉದ್ಯೋಗ ಬದಲಾಯಿಸಿದರೂ ನಿಮ್ಮ ಎಲ್ಲಾ EPF ಖಾತೆಗಳನ್ನು ತನ್ನಡಿಗೆ ಜೋಡಿಸಿಕೊಳ್ಳುತ್ತದೆ.