ಸಾರ್ವಜನಿಕವಾಗಿ ಹೀಗೆ ಮಾಡಿದ್ರೆ ಹಿಡ್ಕೊಂಡ್ ಗುಮ್ತಾರೆ!

ಭಾರತದಲ್ಲಿ ಸಾರ್ವಜನಿಕವಾಗಿ ಅಥವಾ ಕಾನೂನುಬಾಹಿರವಾಗಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ. ಒಂದು ವೇಳೆ ತೊಡಗಿದರೆ ನ್ಯಾಯಾಲಯಗಳಲ್ಲಿ ವಿಧಿಸಲಾಗುವ ಶಿಕ್ಷೆಗಳ ವಿವರ ಇಲ್ಲಿದೆ:

1. ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ:

ಕಾನೂನು: ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 294ರ ಪ್ರಕಾರ ಸಾರ್ವಜನಿಕವಾಗಿ ಅಶ್ಲೀಲವಾಗಿ ನಡೆದುಕೊಳ್ಳುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಮುತ್ತು ಕೊಡುವುದು, ಲೈಂಗಿಕ ಕ್ರಿಯೆಗಳಲ್ಲಿ ತೊಡಗುವುದನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ. ಇನ್ನು ಸಾರ್ವಜನಿಕವಾಗಿ ಅಪ್ಪಿಕೊಳ್ಳುವುದು ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿರುವುದು ಇಲ್ಲಿ ಗಮನಾರ್ಹ.

ಶಿಕ್ಷೆ: ಮೂರು ತಿಂಗಳವರೆಗೆ ಜೈಲು ಅಥವಾ ದಂಡ ಅಥವಾ ಎರಡೂ.

2. ಸಾರ್ವಜನಿಕವಾಗಿ ಅಶ್ಲೀಲವಾಗಿ ನಡೆದುಕೊಳ್ಳುವುದು:

ಕಾನೂನು: IPC ಸೆಕ್ಷನ್ 294 ಹಾಗೂ 509ರ ಪ್ರಕಾರ, ಮಹಿಳೆಯ ಗೌರವಕ್ಕೆ ಧಕ್ಕೆ ತರುವಂತಹ ಕ್ರಿಯೆ/ಸೂಚನೆಗಳನ್ನು ಮಾಡುವಂತಿಲ್ಲ.

ಶಿಕ್ಷೆ: ಸೆಕ್ಷನ್ 294ರ ಅಡಿ 3 ತಿಂಗಳು ಜೈಲು ಅಥವಾ 509ರ ಅಡಿ 1 ವರ್ಷ ಜೈಲಿನ ಜೊತೆಗೆ ದಂಡ.

3. ಸಾರ್ವಜನಿಕರಿಗೆ ತೊಂದರೆ:

ಕಾನೂನು: IPC ಸೆಕ್ಷನ್ 290ರ ಅಡಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಯಾವುದೇ ಕ್ರಿಯೆ ನಡೆಸಿದರೂ ಅಪರಾಧವೆಂದೇ ಪರಿಗಣಿಸಲಾಗುತ್ತದೆ.

ಶಿಕ್ಷೆ: ಇದಕ್ಕೆ ₹200 ವರೆಗೆ ದಂಡ ವಿಧಿಸಲಾಗುತ್ತದೆ.

4. ಲೈಂಗಿಕ ಕ್ರಿಯೆಗಳನ್ನು ಧ್ವನಿ/ಚಿತ್ರದ ಮೂಲಕ ದಾಖಲಿಸುವುದು ಅಥವಾ ಹಂಚುವುದು ನಿಷಿದ್ಧ:

ಕಾನೂನು: ಮಾಹಿತಿ ತಂತ್ರಜ್ಞಾನ ಕಾಯ್ದೆ, ಸೆಕ್ಷನ್ 67 – ಅಶ್ಲೀಲ ವಿಷಯಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹರಡುವುವಂತಿಲ್ಲ.
 👉 ಮೊದಲ ಅಪರಾಧಕ್ಕೆ 3 ವರ್ಷ ಜೈಲು + ₹5 ಲಕ್ಷ ದಂಡ
 👉 ಮರು ಅಪರಾಧ ಎಸಗಿದರೆ 5 ವರ್ಷ ಜೈಲು + ₹10 ಲಕ್ಷ ದಂಡ

ಸೆಕ್ಷನ್ 67A ಅಡಿ:
 👉 ಮೊದಲ ಅಪರಾಧಕ್ಕೆ 5 ವರ್ಷ ಜೈಲು + ₹10 ಲಕ್ಷ ದಂಡ
 👉 ಮರು ಅಪರಾಧ ಎಸಗಿದರೆ 7 ವರ್ಷ ಜೈಲು + ₹10 ಲಕ್ಷ ದಂಡ

5. ಸಾರ್ವಜನಿಕ ಲೈಂಗಿಕ ಕಿರುಕುಳ/ನಿಂದನೆ:

ಕಾನೂನು: IPC ಸೆಕ್ಷನ್ 354ರ ಪ್ರಕಾರ, ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಶಾರೀರಿಕ ಶಕ್ತಿ ಬಳಸಿ ದೌರ್ಜನ್ಯ ಎಸಗುವುದು(ಉದಾ: ಮುಟ್ಟುವುದು, ಬಲವಂತ ಮಾಡುವುದು) ಅಪರಾಧ ಎನಿಸಿಕೊಳ್ಳುತ್ತದೆ.

ಶಿಕ್ಷೆ: 1ರಿಂದ 5 ವರ್ಷಗಳ ಜೈಲು + ದಂಡ

6. ಪರಸ್ಪರ ಒಪ್ಪಿಗೆ ಇದ್ದರೂ ಸಾರ್ವಜನಿಕ ಲೈಂಗಿಕ ಕ್ರಿಯೆ ಸಲ್ಲದು:

  • ಇಬ್ಬರೂ ವಯಸ್ಕರಾಗಿದ್ದು, ಖಾಸಗಿ ಸ್ಥಳದಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಲ್ಲ. ಆದರೆ, ಅದನ್ನು ಸಾರ್ವಜನಿಕವಾಗಿ ಮಾಡಿ ಇತರರಿಗೆ ತೊಂದರೆ ಉಂಟುಮಾಡಿದರೆ, IPC ಸೆಕ್ಷನ್ 294ರ ಅಡಿಯಲ್ಲಿ ಶಿಕ್ಷೆಗೆ ಒಳಪಡಬೇಕಾಗುತ್ತದೆ.

Leave a Reply

Your email address will not be published. Required fields are marked *