2025ರ ಜುಲೈ 15ರಿಂದ ದ್ವಿಚಕ್ರ ವಾಹನ ಸವಾರರಿಗೂ ಟೋಲ್ ವಿಧಿಸಲಾಗುತ್ತದೆ ಎಂಬ ಸುದ್ದಿಯು ಎಲ್ಲೆಡೆ ಹಬ್ಬಿತ್ತು. ಪರಿಣಾಮ ಉದ್ಯೋಗ ಸೇರಿದಂತೆ ಇತರೆ ಕೆಲಸಗಳಿಗೆ ನಿತ್ಯವೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಡಾಡಬೇಕಿದ್ದ ಕೆಲ ದ್ವಿಚಕ್ರ ವಾಹನ ಸವಾರರು ಪೇಚಿಗೆ ಸಿಲುಕಿದ್ದರು.
ಈ ನಡುವೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪ್ರಕಟಣೆ ಹೊರಡಿಸಿರುವ ಸಚಿವರು, ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈ ಕುರಿತು ಬಿತ್ತರವಾಗಿರುವ ವರದಿಗಳೆಲ್ಲವೂ ಸುಳ್ಳು ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಮಾಧ್ಯಮಗಳು ಬಿತ್ತರಿಸಿದ್ದ ವರದಿಯಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರೂ ಕೂಡ ಇನ್ಮುಂದೆ ಟೋಲ್ ಶುಲ್ಕ ಪಾವತಿಸಿಯೇ ಹೊರ ನಡೆಯಬೇಕಾಗುತ್ತದೆ. ತಪ್ಪಿದಲ್ಲಿ ೨ ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂಬ ಸುದ್ದಿಯನ್ನು ಬಿತ್ತರಿಸಲಾಗಿತ್ತು.