ತುಮಕೂರು: ಕೇವಲ ಒಂದೇ ಒಂದು ರೀಲ್ಸ್ ಬದುಕಿ ಬಾಳಬೇಕಿದ್ದ ಯುವತಿಯ ಬದುಕನ್ನೇ ಸರ್ವನಾಶ ಮಾಡಿರುವ ಘಟನೆ ರಾಜ್ಯದಲ್ಲಿ ನಡೆದಿದೆ.
ಹೌದು, ಮೊಬೈಲ್ ನೋಡುತ್ತಾ ಕುಳಿತಿದ್ದ ಓರ್ವ ಯುವತಿ ಬಳಿ ಸ್ಟ್ರೀಟ್ ಫೋಟೋಗ್ರಾಫರ್ ಓರ್ವ ಬಂದು ನಿಮ್ಮ ಫೋಟೋಗಳನ್ನು ತೆಗೆಯಬಹುದೇ? ಎಂದು ಕೇಳುತ್ತಾನೆ. ಆರಂಭದಲ್ಲಿ ಮುಜುಗರ ಮಾಡಿಕೊಳ್ಳುವ ಯುವತಿ, ಕೊನೆಗೂ ಒಪ್ಪಿಗೆ ಸೂಚಿಸುತ್ತಾಳೆ. ನಂತರ ಫೋಟೋಗ್ರಾಫರ್ ಯುವತಿಯನ್ನು ಚೆಂದವಾಗಿ ಸೆರೆಹಿಡಿದು, ಆ ಫೋಟೋಗಳನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡುತ್ತಾನೆ. ಅಷ್ಟೇ ಅಲ್ಲ, ತನ್ನ ಖಾತೆಗೆ ಆಕೆಯ ಖಾತೆಯನ್ನೂ ಟ್ಯಾಗ್ ಮಾಡುತ್ತಾನೆ. ಹಾಗಾಗಿ ಈ ವಿಡಿಯೋ ಆಕೆಯ ಪ್ರಿಯಕರನಿಗೆ ತಲುಪಿ ಇಬ್ಬರೂ ಜಗಳವಾಡುತ್ತಾರೆ. ಕಥೆ ಇಷ್ಟಕ್ಕೇ ಮುಗಿಯುವುದಿಲ್ಲ. ಪ್ರಿಯಕರನ ಜಗಳದಿಂದ ನೊಂದ ಯುವತಿ ದಿಢೀರ್ ಎಂದು ನೇಣು ಬಿಗಿದುಕೊಂಡು ಸಾವನ್ನಪ್ಪುತ್ತಾಳೆ.
ಬಹುಶಃ ತನ್ನ ಸಾವಿನ ಬಗ್ಗೆ ಆಕೆಯೇ ಪ್ರಿಯಕರನಿಗೆ ತಿಳಿಸಿದ್ದಳು ಎನಿಸುತ್ತದೆ. ಕೊನೆಗೆ ಪ್ರಿಯಕರ ಓಡೋಡಿ ಬಂದು ಮನೆಯ ಕೋಣೆಯನ್ನು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ. ತರುವಾಯ ಮನೆಯ ಬಳಿಗೆ ಪೊಲೀಸರು ಬರಲಾಗಿ ಪ್ರಕರಣ ಬೆಳಕಿಗೆ ಬರುತ್ತದೆ.
ಅಂದಹಾಗೆ ಆತ್ಮಹತ್ಯೆಗೆ ಶರಣಾದ ಯುವತಿಯನ್ನು ತುಮಕೂರು ತಾಲೂಕಿನ ಹೊಸಹಳ್ಳಿ ನಿವಾಸಿ ಚೈತನ್ಯ ಎಂದು ಹೇಳಲಾಗಿದ್ದು, ಆಕೆಯ ಪ್ರಿಯಕರ, ರಾಮೇನಹಳ್ಳಿಯ ನಿವಾಸಿ ವಿಜಯ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಏನೇ ಆದರೂ, ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿದು, ಇತರೆ ಹವ್ಯಾಸಗಳನ್ನು ಕಡೆಗಣಿಸಿದರೆ ವಿದ್ಯಾವಂತ ಆಗುವುದಕ್ಕಿಂತ ಕುಟುಂಬಸ್ಥರಿಗೆ ಆಸರೆಯಾದರೂ ಆಗಬಹುದು.