ರಾಷ್ಟ್ರೀಯ ಉದ್ಯಾನವನಗಳು & ರಾಮ್ಸರ ತಾಣಗಳು..

ರಾಷ್ಟ್ರೀಯ ಉದ್ಯಾನವನಗಳು:

>ಅತ್ಯಂತ ಹಳೆಯ ರಾಷ್ಟ್ರೀಯ ಉದ್ಯಾನವನ-ಉತ್ತರಾಖಂಡ್ ನ ಜಿಮ್ ಕಾರ್ಬೆಟ್(1936); ಇದನ್ನು ದೇಶದ ಮೊದಲ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯುತ್ತಾರೆ. ಇದರ ಆರಂಭಿಕ ಹೆಸರು Hailey ರಾಷ್ಟ್ರೀಯ ಉದ್ಯಾನವನ.
>ಅತಿ ಹೆಚ್ಚು ರಾಷ್ಟ್ರೀಯ ಉದ್ಯಾನಗಳನ್ನು ಹೊಂದಿರುವ ರಾಜ್ಯ-ಮಧ್ಯ ಪ್ರದೇಶ
>ಮಧ್ಯ ಪ್ರದೇಶದಲ್ಲಿ 11, ಅಂಡಮಾನ್ & ನಿಕೋಬಾರ್-7 & ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನಗಳಿವೆ.
>ನಾರ್ಥ್ ಬಟನ್ ಐಸ್ ಲ್ಯಾಂಡ್ ರಾಷ್ಟ್ರೀಯ ಉದ್ಯಾನ ಇರುವುದು ಅಂಡಮಾನ್ ನಿಕೋಬಾರ್ ನಲ್ಲಿ.
>ದೇಶದ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನ-ರಾಜಸ್ಥಾನದ ರಣತಂಬೊರ್(1,334 ಕಿ.ಮೀ.)
>ಮಚಲಿ ಹೆಸರಿನ ಹುಲಿಯನ್ನು ರಣತಂಬೋರ್ ಉದ್ಯಾನವನದ ರಾಣಿ ಎನ್ನಲಾಗುತ್ತದೆ.
>ಹುಲಿಗಳಿಗೆ ಹೆಸರುವಾಸಿಯಾಗಿರುವ ರಾಷ್ಟ್ರೀಯ ಉದ್ಯಾನವನ: ಮಧ್ಯ ಪ್ರದೇಶದ ಬಾಂಧವ್ ಘರ್

ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು:

1.ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(1974): ಇದರಲ್ಲಿ ಸ್ವಲ್ಪ ಭಾಗವನ್ನು 2002ರಲ್ಲಿ ಬನ್ನೇರುಘಟ್ಟ ಜಿಯಾಲಾಜಿಕಲ್ ಪಾರ್ಕ್ ಆಗಿ ಪರಿವರ್ತಿಸಲಾಗಿದೆ.
2.ಬಂಡೀಪುರ ರಾಷ್ಟ್ರೀಯ ಉದ್ಯಾನವನ(1974): ಚಾಮರಾಜನಗರದಲ್ಲಿರುವ ಇದನ್ನು 1973ರ ಪ್ರಾಜೆಕ್ಟ್ ಟೈಗರ್ ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಯಿತು. 1986ರಿಂದ ಇದು ನೀಲಗಿರಿ ಜೀವಗೋಳಕ್ಕೆ ಸೇರಿಕೊಂಡಿದೆ.
3.ಅಂಶಿ ರಾಷ್ಟ್ರೀಯ ಉದ್ಯಾನವನ(1987): ಇದು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದು, ಇದನ್ನು ಹುಲಿ ಸಂರಕ್ಷಿತಾರಣ್ಯ ಎಂದೂ ಘೋಷಿಸಲಾಗಿದೆ. ಇಲ್ಲಿ ಬೆಂಗಾಲ್ ತಗರ ಹಾಗೂ ಕಪ್ಪು ಚಿರತೆಗಳನ್ನು ಕಾಣಬಹುದಾಗಿದೆ. ಈ ಉದ್ಯಾನವನದ ಒಳಗೆ ಕಾಳಿ ನದಿ ಕೂಡ ಹರಿಯುವುದು ವಿಶೇಷ.
4.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ(1988): ಇದು ಕೊಡಗು & ಮೈಸೂರು ಜಿಲ್ಲೆಯಲ್ಲಿ ವ್ಯಾಪಿಸಿಕೊಂಡಿದ್ದು, ಇದನ್ನು 37ನೇ ಹುಲಿ ಸಂರಕ್ಷಿತಾರಣ್ಯವೆಂದು 1999ರಲ್ಲಿ ಘೋಷಿಸಲಾಯಿತು.
5.ಕುದುರೆಮುಖ ರಾಷ್ಟ್ರೀಯ ಉದ್ಯಾನವನ: ಇದು ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಇಲ್ಲಿ ಸಿಂಹವನ್ನು ಹೋಲುವ ಮಂಗ(Lion-tailed macaque)ಗಳಿವೆ.

ರಾಮ್ಸರ ತಾಣಗಳು:

>ಹೆಚ್ಚು ರಾಮ್ಸರ ತಾಣಗಳನ್ನು ಹೊಂದಿರುವ ರಾಜ್ಯ ತಮಿಳುನಾಡು
>2024ರಲ್ಲಿ ರಾಮ್ಸರ ತಾಣ ಪಟ್ಟಿಗೆ ಸೇರಿದ ಪ್ರದೇಶಗಳು: ಮಧ್ಯ ಪ್ರದೇಶದ ತವಾ, ತಮಿಳುನಾಡಿನ ತಾಜುವೇಲಿ ಹಾಗೂ ನಂಜರಾಯನ್ ಪಕ್ಷಿಧಾಮಗಳು.
>2023ರಲ್ಲಿ ರಾಮ್ಸರ ಪಟ್ಟಿ ಸೇರಿದ ಕರ್ನಾಟಕದ ತಾಣಗಳು: ಮಾಗಡಿ ಕೆರೆ, ಉತ್ತರ ಕನ್ನಡದ ಅಘನಾಶಿನಿ, ವಿಜಯನಗರ ಜಿಲ್ಲೆಯ ಅಂಕಸಮುದ್ರ.
>ಕರ್ನಾಟಕದ ಅತಿದೊಡ್ಡ ಪಕ್ಷಿಧಾಮ-ರಂಗನತಿಟ್ಟು(40 ಎಕರೆ); ಇದನ್ನು 2022ರಲ್ಲಿ ಕರ್ನಾಟಕದ ಮೊದಲ ರಾಮ್ಸರ ತಾಣವಾಗಿ ಘೋಷಣೆ ಮಾಡಲಾಯಿತು.
>ಕರ್ನಾಟಕದಲ್ಲಿ 4, ದೇಶದಲ್ಲಿ 85 ರಾಮ್ಸರ ತಾಣಗಳಿವೆ.
>ರಾಮ್ಸರ ಕನ್ವೆನ್ಷನ್ 1971ರಲ್ಲಿ ಇಟಲಿಯ ರಾಮ್ಸರ ಎಂಬಲ್ಲಿ ನಡೆದಿತ್ತು. ಹಾಗಾಗಿ ಜೌಗು ಪ್ರದೇಶಗಳಿಗೆ ರಾಮ್ಸರ ತಾಣಗಳೆಂದು ಕರೆಯಲಾಗುತ್ತದೆ.

Leave a Reply

Your email address will not be published. Required fields are marked *