ಚನ್ನಗಿರಿಯ ಮರಾಠ ಕುಟುಂಬದ ದೊರೆ-ದೋಂಡಿಯಾ
ಇವನ ಪರಾಕ್ರಮಗಳಿಗೆ ಜನ-ವಾಘ್(ಹುಲಿ) ಎನ್ನುತ್ತಿದ್ದರು.
1789ರಲ್ಲಿ ಹೈದರಾಲಿ ಸೇನೆಯಲ್ಲಿ ಅಶ್ವಾರೋಹಿ ಸೈನಿಕನಾಗಿದ್ದನು.
ಟಿಪ್ಪು ಜೊತೆಗಿನ ವೈರತ್ವದಿಂದ ಸೆರೆಮನೆ ಸೇರಿದ.
ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಬಳಿಕ ಬ್ರಿಟೀಷರಿಂದ ಬಿಡುಗಡೆಗೊಂಡ.
ಟಿಪ್ಪುವಿನ ಅತೃಪ್ತ ಸೈನಿಕರೇ-ಇವನ ಸೈನ್ಯ.ಮೊದಲಿಗೆ ಬಿದನೂರು-ಶಿವಮೊಗ್ಗ ಕೋಟೆಗಳನ್ನು ವಶಪಡಿಸಿಕೊಂಡ.
ಇವನ ನಿಯಂತ್ರಣದಲ್ಲಿದ್ದ ಹೊನ್ನಾಳಿ, ಹರಿಹರ, ಶಿವಮೊಗ್ಗ & ಶಿಕಾರಿಪುರಗಳನ್ನು ಬ್ರಿಟೀಷರು ವಶಪಡಿಸಿಕೊಂಡರು.
ಬಳಿಕ ಮರಾಠ ಪ್ರದೇಶಗಳತ್ತ ಓಡಿ ಸೋಲು ಕಂಡ.
ಇವನಿಗೆ ಮಾಹೆಯ ಫ್ರೆಂಚರು ಸಹಾಯ ಮಾಡಿದರು.
ಕಿತ್ತೂರು ರಾಣಿ ಚೆನ್ನಮ್ಮ-1824
>ಮಲ್ಲಸರ್ಜನ ಮರಣಾನಂತರ ಅಧಿಕಾರಕ್ಕೆ ಬಂದಳು.
>ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾನೂನಿನ ವಿರುದ್ಧ ಹೋರಾಡಿದಳು.
>ಬೆಳಗಾಂ & ಧಾರವಾಡ ಜಿಲ್ಲೆಗಳ ನಡುವಿನ ಗ್ರಾಮವೇ-ಕಿತ್ತೂರು
>ಚೆನ್ನಮ್ಮನ ದತ್ತು ಪುತ್ರ-ಶಿವಲಿಂಗಪ್ಪ.
>ಧಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟ್ ಆಗಿದ್ದವನು-ಥ್ಯಾಕರೆ
>ಕಿತ್ತೂರಿನ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡವನು-ಕರ್ನಲ್ ಡೀಕ್
>ಚೆನ್ನಮ್ಮಳನ್ನು ಬೈಲಹೊಂಗಲದ ಕೋಟೆಯಲ್ಲಿ ಇರಿಸಲಾಯಿತು.
>ಮರಾಠ ಯುದ್ಧದಲ್ಲಿ ಸಹಾಯ ಮಾಡಿದ್ದಕ್ಕೆ ಬ್ರಿಟೀಷರು ಶಿವಲಿಂಗ ರುದ್ರಸರ್ಜನಿಗೆ ಕಿತ್ತೂರನ್ನು ಬಳುವಳಿಯಾಗಿ >ನೀಡಿದ್ದರು. ಇದು ಥಾಮಸ್ ಮನ್ರೋ ಕಾಲದಲ್ಲಿ ಆಗಿತ್ತು.
>ಚೆನ್ನಮ್ಮಳನ್ನು ಬೈಲಹೊಂದಲದಿಂದ ಕುಸುಗಲ್ಲಿಗೆ ಸ್ಥಳಾಂತರಿಸಲಾಯಿತು.
>ಚೆನ್ನಮ್ಮಳನ್ನು ವಿರೋಧಿಸುತ್ತಿದ್ದವರು-ದೇಸಾಯಿಗಳುವೀರ ಯೋಧ ಸಂಗೊಳ್ಳಿ ರಾಯಣ್ಣ ಅವರದ್ದು ಪರಂಪರಾಗತ ಸೈನಿಕ ಕುಟುಂಬವಾಗಿತ್ತು. ರಾಯಣ್ಣನು ಬ್ರಿಟೀಷರ ವಿರುದ್ಧ ನಂದಗಡ, ಖಾನಾಪುರ & ಸಂಪಗಾವಿಯಲ್ಲಿ ಕಾರ್ಯಾಚರಣೆಗಳನ್ನು ಕೈಗೊಂಡನು. ರಾಯಣ್ಣನನ್ನು ಬಂಧಿಸಲು ಅಮಲ್ದಾರ ಕೃಷ್ಣರಾಯನು ಬ್ರಿಟೀಷರಿಗೆ ಸಹಕರಿಸಿದ. ಬ್ರಿಟೀಷರು ರಾಯಣ್ಣನನ್ನು ಬಂಧಿಸಿ ಧಾರವಾಡಕ್ಕೆ ಕರೆ ತರಲಾಗಿ ರಾಯಣ್ಣನ ಸೇನೆಯೂ ಕೂಡ ಬ್ರಿಟೀಷರಿಗೆ ಶರಣಾಯಿತು. ಕೊನೆಗೆ ರಾಯಣ್ಣನನ್ನು 1831ರಲ್ಲಿ ನಂದಗಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.