ಇಳೈಯಾನ್ ಚೋಳ; ರಾಜಧಾನಿ ಉರೈಯೂರ್
ಚೋಳರ ರಾಜಧಾನಿ-ತಂಜಾವೂರು
ಚೋಳರ ಗ್ರಾಮಾಡಳಿತದ ಬಗ್ಗೆ ವಿವರಿಸುವ ಶಾಸನ-ಉತ್ತರಮೇರೂರು ಶಾಸನ; ಇದನ್ನು ಒಂದನೇ ಪರಾತಂಕನು 919 & 921ರಲ್ಲಿ ಹೊರಡಿಸಿದನು.
ಚೋಳರು & ರಾಷ್ಟ್ರಕೂಟರ ನಡುವೆ ನಡೆದ ಯುದ್ಧ-ತಕ್ಕೋಳಂ ಕದನ; ಈ ಯುದ್ಧದಲ್ಲಿ ರಾಷ್ಟ್ರಕೂಟರಿಗೆ ಗೆಲುವಾಯಿತು.
ರಾಷ್ಟ್ರಕೂಟರ ದಾಳಿಯಿಂದ ದುರ್ಬಲವಾಗಿದ್ದ ಚೋಳ ರಾಜ್ಯವನ್ನು ಮರುಸ್ಥಾಪಿಸಿದವನು-ಒಂದನೇ ರಾಜರಾಜಚೋಳ
ಗಂಗರ ಗಂಗವಾಡಿ & ನೊಳಂಬವಾಡಿಯನ್ನು ಗೆದ್ದುಕೊಂಡು ತಲಕಾಡಿಗೆ ರಾಜರಾಜಪುರ ಎಂದು ಹೆಸರಿಟ್ಟವನು-ಒಂದನೇ ರಾಜರಾಜಚೋಳ; ಈತ ಕಲ್ಯಾಣಿ ಚಾಲುಕ್ಯರ ಸತ್ಯಾಶ್ರಯನ ಮೇಲೂ ದಾಳಿ ಮಾಡಿದ್ದನು.
ಚೋಳರ ಸಾಮ್ರಾಜ್ಯವು ಪಶ್ಚಿಮದಲ್ಲಿ ಕೊಡಗಿನವರೆಗೂ ಹಬ್ಬಿತ್ತು.
ಒಂದನೇ ರಾಜರಾಜಚೋಳ(ಶಿವಪಾದಶೇಖರ, ಚೋಲೇಂದ್ರ ಸಿಂಹ, ಮುಮ್ಮಡಿ ಚೋಳದೇವ, ಜಯಗೊಂಡ, ಚೋಳ ಮಾರ್ತಾಂಡ); ಬಿರುದು-ಗಂಗೈಕೊಂಡ ಚೋಳ
ಒಂದನೇ ರಾಜೇಂದ್ರ ಚೋಳನು ಚಾಲುಕ್ಯ ದೊರೆ ಎರಡನೇ ಜಯಸಿಂಹನನ್ನು ಮಸ್ಕಿ(ಮಸಂಗಿ)ಯಲ್ಲಿ ಸೋಲಿಸಿದನು.
ಆಡಳಿತ ಪದ್ಧತಿ:
ಅರಸನ ಆಪ್ತ ವರ್ಗ-ಉದನ ಕೂಟಂ
ಗ್ರಾಮಾಡಳಿತವನ್ನು ಗ್ರಾಮಸಭೆಗಳು ನಡೆಸುತ್ತಿದ್ದವು.
ಗ್ರಾಮಾಡಳಿತ: ಉತ್ತರ ಮೇರೋರು ಗ್ರಾಮವನ್ನು 30 ಭಾಗ(ಕುಡುಂಬು)ಗಳಾಗಿ ವಿಂಗಡಿಸಲಾಗಿತ್ತು.
ಒಂದು ವರ್ಷದ ಅವಧಿಗೆ ಸದಸ್ಯರ ಆಯ್ಕೆ
ಕುಡುವಲೈ/ಅದೃಷ್ಠ ಪದ್ಧತಿ ಮುಖೇನ ಸದಸ್ಯರ ಆಯ್ಕೆ
ದೇವಸ್ಥಾನ>ಓಲೆಗರಿಯ ಹೆಸರು>ಮಡಿಕೆ>ಚಿಕ್ಕ ಬಾಲಕನಿಂದ ಆಯ್ಕೆ
ಸಮಿತಿ(ವರಿಯಂ)ಗಳು:
ವಾರ್ಷಿಕ ಸಮಿತಿ
ಉದ್ಯಾನ ಸಮಿತಿ
ಕೆರೆ ಕಟ್ಟೆಗಳ ಸಮಿತಿ
ಗ್ರಾಮಸಭೆಯ ಕರ್ತವ್ಯಗಳು: ಗ್ರಾಮಗಳ ಆಸ್ತಿ ರಕ್ಷಣೆ, ಕಂದಾಯ ವಸೂಲಿ, ದೇವಾಲಯ, ಕೆರೆ, ತೋಪು, ಅರಣ್ಯ ರಕ್ಷಣೆ
ಸದಸ್ಯರಾಗಲು ಅರ್ಹತೆ: ಅರ್ಧ ಎಕರೆ ತೆರಿಗೆ ಕೊಡುವ ಭೂಮಿ ಹೊಂದಿರಬೇಕು
ಸ್ವಂತ ಮನೆ ಇರಬೇಕು
ವಯಸ್ಸು: 35-70
ವೇದಕ, ಬ್ರಾಹ್ಮಣಕ & ವ್ಯಾವಹಾರಿಕ ಜ್ಞಾನ ಹೊಂದಿರಬೇಕು.
ಉತ್ತಮ ಚರಿತ್ರೆ ಇರಬೇಕು.
ಅನರ್ಹತೆಗಳು: ಸತತ ಮೂರು ವರ್ಷ ಸದಸ್ಯರಾಗಿದ್ದಾರೆ ಪುನರಾಯ್ಕೆಗೆ ಅನರ್ಹ.
ಸಮಿತಿಯಲ್ಲಿದ್ದು ಲೆಕ್ಕಪತ್ರಗಳನ್ನು ಸಲ್ಲಿಸದವರು & ಹತ್ತಿರದ ಸಂಬಂಧಿಕರು
ದುಷ್ಟರು, ಮೋಸಗಾರರು, ಮಧ್ಯ ಸೇವನೆ, ಕಳ್ಳತನ, ಬ್ರಾಹ್ಮಣ ಹತ್ಯೆ, ವ್ಯಭಿಚಾರ ಆರೋಪ ಹೊತ್ತವರು
ಚೋಳರ ಗ್ರಾಮಗಳನ್ನು ವಿದ್ವಾಂಸರು ಚಿಕ್ಕ ಪ್ರಜಾಪ್ರಭುತ್ವ ರಾಜ್ಯಗಳು ಎಂದು ಕರೆದಿದ್ದಾರೆ.
ಭಾರತದ ಅತಿ ದೊಡ್ಡ & ಎತ್ತರದ ಶಿಖರ ಹೊಂದಿರುವ ದೇವಾಲಯ: ತಂಜಾವೂರಿನ ಬೃಹದೀಶ್ವರ/ರಾಜರಾಜೇಶ್ವರ ದೇವಾಲಯ